ಕೋಡೀನ್
	ಅಫೀಮಿನಲ್ಲಿರುವ ಒಂದು ಆಲ್ಕಲಾಯಿಡ್. ಅಫೀಮಿನ ಪ್ರಧಾನ ಆಲ್ಕಲಾಯಿಡ್ ಆದ ಮಾರ್ಫೀನಿಗೂ ಇದಕ್ಕೂ ಬಹಳ ಹತ್ತಿರದ ಸಂಬಂಧ. ಮಾರ್ಫೀನ್ ರಚನೆಯಲ್ಲಿರುವ ಒಂದು ಫೀನಾಲ್ ಗುಂಪಿನ (-ಔಊ) ಊ ಬದಲು -ಅಊ3 ಇದೆ. ಇದನ್ನು ಅಫೀಮಿನಿಂದ ಬೇರ್ಪಡಿಸಿ ತಯಾರಿಸುತ್ತಾರೆ. ಮಾರ್ಫೀನಿನ ಮೆಥಿಲೀಕರಣದಿಂದಲೂ ತಯಾರಿಸುತ್ತಾರೆ. ಅದಕ್ಕೆ ಮಾರ್ಫೀನಿನ ಪೊಟ್ಯಾಸಿಯಂ ಲವಣವನ್ನು ಮೀಥೈಲ್ ಅಯೊಡೈಡಿನೊಂದಿಗೆ ಬೆರೆಸಿ ಕಾಸುತ್ತಾರೆ. ಕೋಡೀನ್ ಬಿಳಿ ಬಣ್ಣದ ಸ್ಫಟಿಕೀಯ ಪುಡಿ. ನೀರಿನಲ್ಲಿ ಸಾಮಾನ್ಯವಾಗಿಯೂ ಆಲ್ಕೊಹಾಲಿನಲ್ಲಿ ವಿಶೇಷವಾಗಿಯೂ ಲೀನವಾಗುತ್ತದೆ. ದ್ರವನ ಬಿಂದು 154.90. ಇದನ್ನು ವೈದ್ಯರು ಉಪಶಾಮಕವಾಗಿಯೂ (ಸೆಡೇಟಿವ್) ವೇದನಾಹಾರಿಯಾಗಿಯೂ (ಅನಾಲ್‍ಜೆಸಿಕ್) ಬಳಸುತ್ತಾರೆ. ಕೆಮ್ಮಿಗೆ ಮದ್ದಾಗಿಯೂ ಬಳಸುವುದುಂಟು. ಇದರ ಸೇವನೆಯಿಂದ ಚಟ ಬೆಳೆಯುವುದಿಲ್ಲ.                                 (ಬಿ. ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ